ಇಂದು ದೇಶದ ಇತಿಹಾಸದಲ್ಲಿ ಕಪ್ಪು ದಿನ, 'ಜಷ್ನ-ಎ-ಶಾಹೀನ್' ಸಿದ್ಧತೆಯಲ್ಲಿ ಸ್ವರಾ ಭಾಸ್ಕರ್

1990ರ ಜನವರಿ 19ರಂದು ನಡೆದ ಘಟನೆ ಇದರ ಪ್ರತೀಕವಾಗಿ ಇಂದಿಗೂ ಮುಂದುವರೆದಿದೆ. ಜಿಹಾದಿ ಇಸ್ಲಾಮಿಕ್ ಸಂಘಟನೆಗಳು ಕಾಶ್ಮೀರ ಪಂಡಿತರ ಮೇಲೆ ಯಾವ ರೀತಿ ಅತ್ಯಾಚಾರ ನಡೆಸಿದ್ದವು ಎಂದರೆ, ಅವರ ಬಳಿ ಕೇವಲ ಮೂರು ಆಯ್ಕೆಗಳು ಮಾತ್ರ ಉಳಿದುಕೊಂಡಿದ್ದವು-ಧರ್ಮ ಪರಿವರ್ತನೆ, ಸಾವು ಬಿಟ್ಟರೆ ಪಲಾಯನ.

Last Updated : Jan 19, 2020, 01:46 PM IST
ಇಂದು ದೇಶದ ಇತಿಹಾಸದಲ್ಲಿ ಕಪ್ಪು ದಿನ, 'ಜಷ್ನ-ಎ-ಶಾಹೀನ್' ಸಿದ್ಧತೆಯಲ್ಲಿ ಸ್ವರಾ ಭಾಸ್ಕರ್ title=

ನವದೆಹಲಿ: 30 ವರ್ಷಗಳ ಹಿಂದೆ ಇಂದಿನ ದಿನವೇ ಜಮ್ಮು ಮತ್ತು ಕಾಶ್ಮೀರದಿಂದ ಕಾಶ್ಮೀರಿ ಪಂಡಿತರು ಪಲಾಯನಗೈದಿದ್ದರು. ಏತನ್ಮಧ್ಯೆ ಹಲವು ಸರ್ಕಾರಗಳು, ಋತುಗಳು ಹಾಗೂ ಪೀಳಿಗೆಗಳು ಬದಲಾದರೂ ಕೂಡ ಕಾಶ್ಮೀರಿ ಪಂಡಿತರ ವಾಪಸಾತಿ ಹಾಗೂ ನ್ಯಾಯಕ್ಕಾಗಿ ಇಂದಿಗೂ ಕೂಡ ಹೋರಾಟ ನಡೆಯುತ್ತಲೇ ಇವೆ. 

1990ರ ಜನವರಿ 19ರಂದು ನಡೆದ ಘಟನೆ ಇದರ ಪ್ರತೀಕವಾಗಿ ಇಂದಿಗೂ ಮುಂದುವರೆದಿದೆ. ಜಿಹಾದಿ ಇಸ್ಲಾಮಿಕ್ ಸಂಘಟನೆಗಳು ಕಾಶ್ಮೀರ ಪಂಡಿತರ ಮೇಲೆ ಯಾವ ರೀತಿ ಅತ್ಯಾಚಾರ ನಡೆಸಿದ್ದವು ಎಂದರೆ, ಅವರ ಬಳಿ ಕೇವಲ ಮೂರು ಆಯ್ಕೆಗಳು ಮಾತ್ರ ಉಳಿದುಕೊಂಡಿದ್ದವು-ಧರ್ಮ ಪರಿವರ್ತನೆ, ಸಾವು ಬಿಟ್ಟರೆ ಪಲಾಯನ. ಈ ಪಂಡಿತರು ಇಂದಿಗೂ ಕೂಡ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. 

ಆದರೆ, ಡಿಸೆಂಬರ್ 16ಕ್ಕೆ ಟ್ವೀಟ್ ಮಾಡಿದ್ದ ಖ್ಯಾತ ಬಾಲಿವುಡ್ ನಟಿ ಸ್ವರಾ ಭಾಸ್ಕರ್, "ಜಷ್ನ್-ಎ-ಶಾಹೀನ್, ಸಂಗೀತ ಮತ್ತು ಶಾಯರಿ ಸಂಜೆ, ಬನ್ನಿ ನಮ್ಮ ಜೊತೆ ಸಂಭ್ರಮಿಸಿ' ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಖ್ಯಾತ ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಸ್ವರಾ ಭಾಸ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ನಟಿಯ ಟ್ವೀಟ್ ಗೆ ಮರು ಟ್ವೀಟ್ ಮಾಡಿದ್ದ ಅವರು, " ನಿಮಗೆ ನಾಚಿಕೆಯಾಗುವುದಿಲ್ಲವೆ. ಕಾಶ್ಮೀರಿ ಹಿಂದುಗಳ ಮಾರಣಹೋಮಕ್ಕೆ ಬಳಸಲಾಗಿರುವ ಸ್ವಾತಂತ್ರ್ಯದ ಘೋಷಣೆಗಳನ್ನು ಬಳಸುತ್ತಿರುವಿರಿ. ನೀವು ಇದನ್ನು ಕೇವಲ ತೋರ್ಪಡಿಕೆಗಾಗಿ ಮಾಡುತ್ತಿದ್ದು, ನಾವು ನಿಮ್ಮ ಮುಖವಾಡವನ್ನು ಬಹಿರಂಗಗೊಳಿಸಿದ್ದೇವೆ" ಎಂದಿದ್ದಾರೆ.

"ನೀವು ಎಂದಿಗೂ ಕೂಡ ಸ್ವಾತಂತ್ರ್ಯದ ಹಾಡುಗಳನ್ನು ಹಾಡುವುದಿಲ್ಲ ಎಂದು ಸಾರ್ವಜನಿಕವಾಗಿ  ಮಾತು ಕೊಡಿ" ಎಂದು ಅಗ್ನಿಹೋತ್ರಿ ಮುಂದೆ ಬರೆದುಕೊಂಡಿದ್ದರು.

ಇತ್ತ ದೆಹಲಿಯ ಶಾಹೀನ್ ಬಾಗ್ ನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಇದಕ್ಕಾಗಿ ವಿಶೇಷ ಕಮಿಷನರ್ ಜನರ ಜೊತೆ ಕೂಡ ಮಾತುಕತೆ ನಡೆಸಿದ್ದಾರೆ.

Trending News