ಸಮಂತಾʼರನ್ನು ಕಾಡ್ತಿದೆ ʻದಂಗಲ್‌ʼ ನಟಿಯ ಪ್ರಾಣ ತೆಗೆದ ಈ ಕಾಯಿಲೆ.!

Suhani Bhatnagar Dies From Rare Disease : 19 ವರ್ಷದ ನಟಿ ಸುಹಾನಿ ಭಟ್ನಾಗರ್ ಅವರ ಸಾವು ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಈಗ ಎಲ್ಲರೂ ಅವರ ಅನಾರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಬಯಸುತ್ತಿದ್ದಾರೆ. 

Written by - Chetana Devarmani | Last Updated : Feb 19, 2024, 03:47 PM IST
  • ʻದಂಗಲ್‌ʼ ನಟಿಯ ಪ್ರಾಣ ತೆಗೆದ ರೋಗ ಯಾವುದು?
  • ನಟಿ ಸುಹಾನಿ ಭಟ್ನಾಗರ್ ಸಾವಿಗೆ ಕಾರಣ
  • ಡರ್ಮಟೊಮಿಯೊಸಿಟಿಸ್ ನಿಂದ ಬಳಲುತ್ತಿದ್ದ ನಟಿ
ಸಮಂತಾʼರನ್ನು ಕಾಡ್ತಿದೆ ʻದಂಗಲ್‌ʼ ನಟಿಯ ಪ್ರಾಣ ತೆಗೆದ ಈ ಕಾಯಿಲೆ.!  title=

Suhani Bhatnagar died by dermatomyositis: ಅಮೀರ್ ಖಾನ್ ಅವರ ದಂಗಲ್ ಸಿನಿಮಾ ನಟಿ ಸುಹಾನಿ ಭಟ್ನಾಗರ್ ಕೇವಲ 19 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸುಹಾನಿ ಒಂದು ಕಾಯಿಲೆಯಿಂದ ಬಳಲುತ್ತಿದ್ದರು. ಈ ಅನಾರೋಗ್ಯವೇ ಅವರ ಜೀವವನ್ನು ಬಲಿ ಪಡೆಯಿತು. ಇದನ್ನು ಬಹಳ ಅಪರೂಪದ ಕಾಯಿಲೆ ಎಂದು ಪರಿಗಣಿಸಲಾಗಿದೆ. ಇದು ಕೆಲವೇ ಜನರಿಗೆ ಸಂಭವಿಸುತ್ತದೆ. 

ಸುಹಾನಿ ಡರ್ಮಟೊಮಿಯೊಸಿಟಿಸ್ ನಿಂದ ಬಳಲುತ್ತಿದ್ದರು. ಇದು ತುಂಬಾ ಗಂಭೀರವಾದ ಕಾಯಿಲೆಯಾಗಿದೆ. ಇತ್ತೀಚೆಗಷ್ಟೇ ಈ ಕಾಯಿಲೆ ವಿರುದ್ಧ ಮತ್ತೊಬ್ಬ ಖ್ಯಾತ ನಟಿ ಸಹ ಹೋರಾಡಿದ್ದರು. ಆದರೆ ಈ ಕಾಯಿಲೆಯಿಂದ ಹೊರಬಂದು ಈಗ ಗುಣಮುಖರಾಗಿದ್ದಾರೆ. 

ಇದನ್ನೂ ಓದಿ: ಶೂಟಿಂಗ್ ವೇಳೆ ಅಕ್ಷಯ್ ಕುಮಾರ್‌ಗೆ ಕಚ್ಚಿದ್ದ ಶಾರ್ಕ್‌.. ಸಾವಿನ ಕದ ತಟ್ಟಿ ಬಂದ ಬಾಲಿವುಡ್ ಕಿಲಾಡಿ!!

ಸುಹಾನಿ ಸಾವನ್ನಪ್ಪಿದ ಕಾಯಿಲೆಯಿಂದ ಕೆಲವೇ ಕೆಲವು ಜನರು ಬಳಲುತ್ತಿದ್ದಾರೆ. ಸೌತ್‌ನ ಟಾಪ್ ನಟಿ ಸಮಂತಾ ರುತ್ ಪ್ರಭು ಸಹ ಈ ಕಾಯಿಲೆಗೆ ತುತ್ತಾಗಿದ್ದರು. ಸಮಂತಾ ಕೂಡ ಈ ಖಾಯಿಲೆಗೆ ತುತ್ತಾಗಿದ್ದು, ಈಗ ಕ್ರಮೇಣ ಗುಣಮುಖರಾಗುತ್ತಿದ್ದಾರೆ. 

ಸಮಂತಾ ರುತ್ ಪ್ರಭು, 2022 ರಲ್ಲಿ ತನಗೆ ಆಟೋಇಮ್ಯೂನ್ ಕಾಯಿಲೆ ಮಯೋಸಿಟಿಸ್ ಇದೆ ಎಂದು ಬಹಿರಂಗಪಡಿಸಿದರು. ಇದೇ ಕಾರಣಕ್ಕೆ ಅವರು ಚಲನಚಿತ್ರಗಳಿಂದ ವಿರಾಮ ತೆಗೆದುಕೊಳ್ಳಬೇಕಾಯಿತು. ಈ ರೋಗದಲ್ಲಿ ಮಾನವನ ಪ್ರತಿರಕ್ಷಣಾ ವ್ಯವಸ್ಥೆಯು ಅಂದರೆ ರೋಗಗಳ ವಿರುದ್ಧ ಹೋರಾಡುವ ಇಮ್ಯುನ್‌ ಸಿಸ್ಟಮ್‌ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಈ ಅವಧಿಯಲ್ಲಿ ಅವರ ತೂಕ ಸಹ ಹೆಚ್ಚಾಯಿತು. ತೀರಾ ಅಶಕ್ತರಾದರು. 

ಬೆಳಗ್ಗೆ ಎದ್ದಾಗ ದೇಹ, ಕಣ್ಣಿಗೆ ಸೂಜಿ ಚುಚ್ಚಿದಂತೆ ನೋವಾಗುತ್ತಿತ್ತು ಎಂದು ಸಮಂತಾ ಹೇಳಿದ್ದರು. ಬಹಳ ಸಮಯದ ವರೆಗೆ ಈ ರೋಗಕ್ಕೆ ಚಿಕಿತ್ಸೆ ತೆಗೆದುಕೊಂಡರು. ಈ ಕಾರಣದಿಂದಾಗಿ ಅವರು ಕೆಲಸದಿಂದ ವಿರಾಮ ತೆಗೆದುಕೊಳ್ಳಬೇಕಾಯಿತು. ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. 

ಇದನ್ನೂ ಓದಿ: BAFTA 2024 ನಲ್ಲಿ ಮಿಂಚಿದ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News