ನಾಗ ಚೈತನ್ಯ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಈತನನ್ನು!

Samantha First Love: ನಟಿ ಸಮಂತಾ ಹಾಗೂ ನಾಗಚೈತನ್ಯ ಬಹು ಕಾಲದವರೆಗೆ ಪ್ರೀತಿಸಿ ಮದುವೆಯಾಗಿದ್ದರು ಎಂದು ಎಲ್ಲರಿಗೂ ಗೊತ್ತು.. ಆದರೆ ಸ್ಯಾಮ್‌  ಅವರ ಫಸ್ಟ್‌ ಲವ್‌ ನಾಗ ಚೈತನ್ಯ ಅಲ್ಲ..  

Written by - Savita M B | Last Updated : Mar 2, 2024, 12:29 PM IST
  • ನಟಿ ಸಮಂತಾ ಖುಷಿ ಸಿನಿಮಾದ ನಂತರ ಸಿನಿಮಾಗಳಿಗೆ ಕೊಂಚ ಬ್ರೇಕ್‌ ನೀಡಿದ್ದರು
  • ಇತ್ತೀಚೆಗೆ ಸ್ಯಾಮ್‌ ಮತ್ತೆ ಕಂಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ..
  • ಇದೇ ವೇಳೆ ಸಮಂತಾ ಮೊದಲ ಪ್ರೀತಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ
ನಾಗ ಚೈತನ್ಯ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಈತನನ್ನು!  title=

Samantha: ನಟಿ ಸಮಂತಾ ಖುಷಿ ಸಿನಿಮಾದ ನಂತರ ಸಿನಿಮಾಗಳಿಗೆ ಕೊಂಚ ಬ್ರೇಕ್‌ ನೀಡಿದ್ದರು.. ಇತ್ತೀಚೆಗೆ ಸ್ಯಾಮ್‌ ಮತ್ತೆ ಕಂಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.. ಇದೇ ವೇಳೆ ಸಮಂತಾ ಮೊದಲ ಪ್ರೀತಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. ಹಾಗಾದ್ರೆ ಸಮಂತಾ ಫಸ್ಟ್‌ ಲವ್‌ ಯಾರು ಅನ್ನೋದನ್ನು ಇದೀಗ ತಿಳಿಯೋಣ..

ಸಮಂತಾ ನಟಿಸಿದ ಮೊದಲ ಚಿತ್ರ ಯೆ ಮಾಯಾ ಚೆಸಾವೆ.. ಗೌತಮ್ ಮೆನನ್ ನಿರ್ದೇಶನದ ಈ ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದು ನಾಗ ಚೈತನ್ಯ ಅವರ ಎರಡನೇ ಚಿತ್ರ.. ಸಿನಿಮಾದಲಲಿ ನಾಗ ಚೈತನ್ಯ-ಸಮಂತಾ ಕೆಮಿಸ್ಟ್ರಿ ಅಭಿಮಾನಿಗಳಿಗೆ  ಸಖತ್‌ ಇಷ್ಟವಾಗಿತ್ತು.. 

ಇದನ್ನೂ ಓದಿ-Sreeleela: ಮದುವೆಯಾಗದೇ ಇಬ್ಬರು ಮಕ್ಕಳ ತಾಯಿಯಾದ ನಟಿ ಶ್ರೀಲೀಲಾ.!

ಅಲ್ಲಿಂದಲೇ ಅವರಿಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು.. ಹಲವು ದಿನಗಳಕಾಲದಿಂದ ಡೇಟಿಂಗ್‌ ಮಾಡುತ್ತಿದ್ದರೂ ತಮ್ಮ ಪ್ರೇಮ ಸಂಬಂಧವನ್ನು ಗುಟ್ಟಾಗಿ ಇಟ್ಟಿದ್ದರು.. ನಂತರ ಕುಟುಂಬದ ಒಪ್ಪಿಗೆಯ ಮೇರೆಗೆ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಸಮಂತಾ-ನಾಗ ಚೈತನ್ಯ ಮದುವೆಯಾದರು. ನಾಲ್ಕು ವರ್ಷಗಳ ನಂತರ ಭಿನ್ನಾಭಿಪ್ರಾಯಗಳಿಂದ ವಿಚೇಧನ ಪಡೆದು ದೂರವಾದರು..ಆದರೂ ಇಂದಿಗೂ ಸಮಂತಾ-ನಾಗ ಚೈತನ್ಯ ಟಾಲಿವುಡ್‌ನ ಲವ್ಲಿ ಕಪಲ್ ಆಗಿಯೇ ಗುರುತಿಸಿಕೊಂಡಿದ್ದಾರೆ.. 

ಇದನ್ನೂ ಓದಿ-Yash: ರಾಕಿಭಾಯ್‌ ರಾಜಕೀಯಕ್ಕೆ ಎಂಟ್ರೀ ಕೊಡ್ತಾರಾ? ಯಶ್‌ ಹೇಳಿದ್ದೇನು?

ಆದರೆ ಸಮಂತಾಗೆ ನಾಗ ಚೈತನ್ಯ ಜೊತೆ ಮೊದಲ ಲವ್ ಆಗಿಲ್ಲ. ಅದಕ್ಕೂ ಮೊದಲು ಸ್ಯಾಮ್‌ ಬೇರೆ ಯಾರನ್ನೋ ಪ್ರೀತಿಸುತ್ತಿದ್ದರಂತೆ.. ಇತ್ತೀಚೆಗಷ್ಟೇ ಆ ಲವ್ ಸ್ಟೋರಿ ಬಹಿರಂಗವಾಗಿದ್ದು.. ಸಮಂತಾ ಶಾಲಾ ದಿನಗಳಲ್ಲಿ ಶಾಲೆಗೆ ಹೋಗಲು ಎರಡು ಬಸ್ಸುಗಳನ್ನು ಬದಲಾಯಿಸುತ್ತಿದ್ದರಂತೆ.. ಆಗ ಸಮಂತಾಗಾಗಿ ಒಬ್ಬ ಹುಡುಗ ಪ್ರತಿದಿನ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದನಂತೆ.. ಶಾಲೆಯವರೆಗೂ ಆತ ಅವರನ್ನು ಹಿಂಬಾಲಿಸುತ್ತಿದ್ದನಂತೆ.. ಒಂದು ದಿನ ಸಮಂತಾ ನನ್ನ ಫಾಲೋ ಮಾಡುತ್ತಿರೋದು ಯಾಕೆ ಎಂದು ಕೇಳಿದಾಗ ಆತ ಏನೂ ಹೇಳದೇ ಓಡಿ ಹೋಗಿದ್ದನಂತೆ.. 

ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ ಸಮಂತಾ "ಇದು ಪ್ರೀತಿಯೋ ಇಲ್ಲವೋ ಗೊತ್ತಿಲ್ಲ... ಆದರೆ ನನ್ನ ಪ್ರಕಾರ ಇದು ನನ್ನ ಮೊದಲ ಪ್ರೀತಿ" ಎಂದು ಸಮಂತಾ ಹೇಳಿದ್ದಾರೆ. ಇನ್ನು ಹಲವು ವರ್ಷಗಳಿಂದ ಮಯೋಸಿಟಿಸ್ ನಿಂದ ಬಳಲುತ್ತಿರುವ ಸಮಂತಾ ಅವರು ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾಗಿಲ್ಲ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News