Dimple Kapadia: 15 ನೇ ವಯಸ್ಸಿಗೆ ಗರ್ಭಿಣಿ, ಸ್ಟಾರ್ ಪಟ್ಟ ಕಳೆದುಕೊಂಡ ಖ್ಯಾತ ನಟಿ.. ಮೇಣದಬತ್ತಿ ಮಾರಿ ಜೀವನ ನಡೆಸುವ ಸ್ಥಿತಿ..!

Dimple Kapadia Life story : ಡಿಂಪಲ್ ಕೇವಲ 14 ವರ್ಷ ವಯಸ್ಸಿನವರಾಗಿದ್ದರು ತನಗಿಂತ 15 ವರ್ಷ ಹಿರಿಯ ನಟ ರಾಜೇಶ್ ಖನ್ನಾ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು.

Written by - Chetana Devarmani | Last Updated : May 6, 2024, 10:08 AM IST
  • 15 ನೇ ವಯಸ್ಸಿಗೆ ಗರ್ಭಿಣಿ
  • ಸ್ಟಾರ್ ಪಟ್ಟ ಕಳೆದುಕೊಂಡ ಖ್ಯಾತ ನಟಿ
  • ಬಾಲಿವುಡ್‌ ಸಿನಿಪ್ರಿಯರ ಹೃದಯಗೆದ್ದ ಬೆಡಗಿ
Dimple Kapadia: 15 ನೇ ವಯಸ್ಸಿಗೆ ಗರ್ಭಿಣಿ, ಸ್ಟಾರ್ ಪಟ್ಟ ಕಳೆದುಕೊಂಡ ಖ್ಯಾತ ನಟಿ.. ಮೇಣದಬತ್ತಿ ಮಾರಿ ಜೀವನ ನಡೆಸುವ ಸ್ಥಿತಿ..! title=

Dimple Kapadia Rajesh Khanna: ಬಾಲಿವುಡ್‌ನಲ್ಲಿ ರಿಷಿ ಕಪೂರ್, ನೀತು ಸಿಂಗ್, ಹೃತಿಕ್ ರೋಷನ್ ಮತ್ತು ಕಾಜೋಲ್ ಹೀಗೆ ಅನೇಕ ಸ್ಟಾರ್‌ಗಳು ತಮ್ಮ ವೃತ್ತಿಜೀವನದ ಆರಂಭದಲ್ಲಿಯೇ ಯಶಸ್ವಿಯಾದರು. ತನ್ನ ಸೌಂದರ್ಯ ಹಾಗೂ ನಟನೆಯಿಂದ ಜನರ ಮನಗೆದ್ದಿದ್ದ ಈ ನಟಿ ಗರ್ಭಿಣಿಯಾದ ಬಳಿಕ ತನ್ನ ಎಲ್ಲಾ ಸ್ಟಾರ್‌ಡಮ್ ಅನ್ನು ಕಳೆದುಕೊಂಡರು.  

ಡಿಂಪಲ್ ಕಪಾಡಿಯಾ.. ಬಾಲಿವುಡ್‌ ಸಿನಿಪ್ರಿಯರ ಹೃದಯಗೆದ್ದ ಹೆಸರಿದು. ಜೂನ್ 1957 ರಲ್ಲಿ ಬಾಂಬೆಯಲ್ಲಿ ಶ್ರೀಮಂತ ಗುಜರಾತಿ ಉದ್ಯಮಿಯ ಮನೆಯಲ್ಲಿ ಡಿಂಪಲ್ ಕಪಾಡಿಯಾ ಜನಿಸಿದರು. ಬಾಲ್ಯದಲ್ಲಿ ಅಮೀನಾ ಎಂದು ಕರೆಯಲಾಗುತ್ತಿತ್ತು. ಆದರೆ ಬಳಿಕ ಡಿಂಪಲ್ ಎಂಬ ಹೆಸರು ಅಂಟಿಕೊಂಡಿತು. ಡಿಂಪಲ್ ಕಪಾಡಿಯಾ ಮುಂದೆ ಸಿನಿರಂಗಕ್ಕೆ ಎಂಟ್ರಿಕೊಟ್ಟರು. 

ಡಿಂಪಲ್ ಕೇವಲ 14 ವರ್ಷ ವಯಸ್ಸಿನವರಾಗಿದ್ದರು ತನಗಿಂತ 15 ವರ್ಷ ಹಿರಿಯ ನಟ ರಾಜೇಶ್ ಖನ್ನಾ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. 1973 ರಲ್ಲಿ 15 ವರ್ಷದ ಡಿಂಪಲ್ ಮತ್ತು 30 ವರ್ಷದ ರಾಜೇಶ್ ಖನ್ನಾ ಅವರ ಜೊತೆ ಮದುವೆಯಾದರು.

ಡಿಂಪಲ್ ಕೇವಲ 15 ವರ್ಷದವರಿದ್ದಾಗಲೇ ಗರ್ಭಿಣಿಯಾದರು. ಬಾಬಿ ಸಿನಿಮಾದಲ್ಲಿ ರಿಷಿ ಕಪೂರ್‌ ಜೊತೆ ನಟಿಸಿದ್ದ ಡಿಂಪಲ್, ಸಿನಿಮಾ ಬಿಡುಗಡೆ ಆಗುವ ಮೊದಲೇ ಮದುವೆ ಆಗಿದ್ದರು. ಆ ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಾಬಿ ಬಿಡುಗಡೆಯಾಯಿತು. ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಯಿತು. ಆದರೆ ಡಿಂಪಲ್ ತನ್ನ ಪತಿಯ ಇಚ್ಛೆಯಂತೆ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದರು.

ಇದನ್ನೂ ಓದಿ: ಒಂದು ಚಮಚ ತುಪ್ಪವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಹೀಗೆ ತಿನ್ನಿ, ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ.. ಶಿಲ್ಪಾ ಶೆಟ್ಟಿ ಕೂಡ ಇದನ್ನೇ ಮಾಡೋದು!

ಆದರೆ ಡಿಂಪಲ್ ಮತ್ತು ರಾಜೇಶ್ ಖನ್ನಾ ದಾಂಪತ್ಯ ಜೀವನ ಬಹಳ ಸಮಯ ಉಳಿಯಲಿಲ್ಲ. ಸಂಬಂಧದಲ್ಲಿ ಕ್ರಮೇಣ ಬಿರುಕು ಮೂಡಲು ಶುರುವಾಯಿತು. 1982 ರಲ್ಲಿ ಇಬ್ಬರೂ ಬೇರ್ಪಟ್ಟರು ಆದರೆ ವಿಚ್ಛೇದನ ಪಡೆಯಲಿಲ್ಲ. 1985 ರಲ್ಲಿ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಡಿಂಪಲ್ ಈ ಬಗ್ಗೆ ಮಾತನಾಡಿದ್ದರು. "ನಾನು ಮತ್ತು ರಾಜೇಶ್ ಮದುವೆಯಾದ ದಿನದಂದು ನಮ್ಮ ಮನೆಯಲ್ಲಿ ಜೀವನ ಮತ್ತು ಸಂತೋಷ ಎರಡೂ ಕೊನೆಗೊಂಡಿತು" ಎಂದು ಹೇಳಿದರು. 

ನಂತರದ ದಿನಗಳಲ್ಲಿ ಡಿಂಪಲ್ ಅವರು ರಾಜೇಶ್‌ ಖನ್ನಾ ಜೊತೆ ವಿಚ್ಛೇದನ ಪಡೆದರು. 1984 ರಲ್ಲಿ, ಡಿಂಪಲ್ ಸಾಗರ್ ಚಿತ್ರದ ಮೂಲಕ ಮತ್ತೆ ಸಿನಿರಂಗಕ್ಕೆ ಮರಳಿದರು. ರಿಷಿ ಕಪೂರ್ ಜೊತೆಗಿನ ಮತ್ತೊಂದು ಹಿಟ್ ಇದಾಯಿತು. ಇದಾದ 10 ವರ್ಷಗಳಲ್ಲೇ ಡಿಂಪಲ್ ಬಾಲಿವುಡ್‌ನ ಅಗ್ರ ನಾಯಕಿಯಾಗಿ ಮಿಂಚಿದರು.

1998 ರಲ್ಲಿ ಅವಕಾಶ ಕಡಿಮೆ ಆದಾಗ ಡಿಂಪಲ್ ವ್ಯಾಪಾರವನ್ನು ಪ್ರಾರಂಭಿಸಿದರು. ಬ್ರ್ಯಾಂಡ್ ದಿ ಫಾರವೇ ಟ್ರೀ ಅಡಿಯಲ್ಲಿ ಮೇಣದಬತ್ತಿಗಳನ್ನು ವಿನ್ಯಾಸಗೊಳಿಸಲು ಮತ್ತು ಮಾರಾಟ ಮಾಡಲು ಪ್ರಾರಂಭಿಸಿದರು. 

ದಿಲ್ ಚಾಹ್ತಾ ಹೈ, ಲಕ್ ಬೈ ಚಾನ್ಸ್, ಕಾಕ್‌ಟೈಲ್, ದಬಾಂಗ್, ಬ್ರಹ್ಮಾಸ್ತ್ರ, ಮತ್ತು ಪಠಾಣ್‌ ನಂತಹ ಚಲನಚಿತ್ರಗಳಲ್ಲಿ ಡಿಂಪಲ್ ಕಪಾಡಿಯಾ ಪೋಷಕ ಪಾತ್ರಗಳಲ್ಲಿ ನಟಿಸಿ ಯಶಸ್ವಿಯಾದರು. 2020 ರಲ್ಲಿ 62 ನೇ ವಯಸ್ಸಿನಲ್ಲಿ ಕ್ರಿಸ್ಟೋಫರ್ ನೋಲನ್ ಅವರ ಟೆನೆಟ್‌ಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಹಾಲಿವುಡ್‌ಗೆ ಪದಾರ್ಪಣೆ ಮಾಡಿದರು. 

ಇದನ್ನೂ ಓದಿ: ನಟಿ ಸಮಂತಾ ಅರೆಬೆತ್ತಲೆ ಫೋಟೋ ವೈರಲ್!‌ ಪೋಸ್ಟ್‌ ಮಾಡಿ ಡಿಲೀಟ್ ಮಾಡಿದ್ರಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News