EPFO Rules: ನಿಮ್ಮ ಪಿಎಫ್ ಖಾತೆಯಲ್ಲಿ ಸಿಗಲಿದೆ 50,000 ರೂ. ನೇರ ಪ್ರಯೋಜನ, ಆದರೆ...

EPFO rules: ನೌಕರರ ಭವಿಷ್ಯ ನಿಧಿ ಸಂಸ್ಥೆ ಚಂದಾದಾರರಿಗೆ ಇಪಿಎಫ್ ಖಾತೆಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳ ಬಗ್ಗೆ ತಿಳಿದಿರುವುದಿಲ್ಲ. ಜನರು ತಮ್ಮ ಖಾತೆಗೆ ಸಂಬಂಧಿಸಿದ ಪ್ರಯೋಜನಗಳ ಲಾಭವನ್ನು ಪಡೆಯಲು ಸಾಧ್ಯವಾಗದೇ ಇರಲು ಇದೇ ಪ್ರಮುಖ ಕಾರಣ.

Written by - Yashaswini V | Last Updated : Jun 7, 2021, 01:25 PM IST
  • ಪಿಎಫ್ ಖಾತೆದಾರರು ತಮ್ಮ ಉದ್ಯೋಗಗಳನ್ನು ಬದಲಾಯಿಸಿದ ನಂತರವೂ ಒಂದೇ ಇಪಿಎಫ್ (EPF) ಖಾತೆಗೆ ಕೊಡುಗೆ ನೀಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ
  • ಸತತ 20 ವರ್ಷಗಳ ಕಾಲ ಒಂದೇ ಖಾತೆಯಲ್ಲಿ ಕೊಡುಗೆ ನೀಡಿದ ನಂತರ ಅವರು ಲಾಯಲ್ಟಿ-ಕಮ್-ಲೈಫ್ ನ ಪ್ರಯೋಜನವನ್ನು ಪಡೆಯಬಹುದು
  • ಇದರರ್ಥ ಅರ್ಹ ಪಿಎಫ್ ಗ್ರಾಹಕರಿಗೆ 50,000 ರೂ.ವರೆಗೆ ಹೆಚ್ಚುವರಿ ಲಾಭ ಸಿಗುತ್ತದೆ
EPFO Rules: ನಿಮ್ಮ ಪಿಎಫ್ ಖಾತೆಯಲ್ಲಿ ಸಿಗಲಿದೆ 50,000 ರೂ. ನೇರ ಪ್ರಯೋಜನ, ಆದರೆ...  title=
ಅರ್ಹ ಪಿಎಫ್ ಗ್ರಾಹಕರಿಗೆ ಸಿಗಲಿದೆ 50,000 ರೂ.ವರೆಗೆ ಹೆಚ್ಚುವರಿ ಲಾಭ

ನವದೆಹಲಿ: EPFO rules- ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಚಂದಾದಾರರಿಗೆ ಪಿಎಫ್ ಖಾತೆಗೆ ಸಂಬಂಧಿಸಿದ ಹಲವು ಪ್ರಮುಖ ನಿಯಮಗಳ ಬಗ್ಗೆ ತಿಳಿದಿರುವುದಿಲ್ಲ. ಕೆಲವು ಚಂದಾದಾರರು ತಮ್ಮ ಪಿಎಫ್ ಖಾತೆಯಿಂದ ಲಭ್ಯವಾಗುವ ಪ್ರಯೋಜನಗಳ ಲಾಭವನ್ನು ಪಡೆಯಲು ಸಾಧ್ಯವಾಗದಿರಲು ಇದು ಕಾರಣವಾಗಿದೆ. 

ಇಡಿಎಲ್ಐ ಯೋಜನೆಯಡಿ ಲಭ್ಯವಿರುವ ವಿಮೆ, ಪಿಂಚಣಿ, 7 ಲಕ್ಷ ರೂ.ಗಳ ಆದಾಯ ತೆರಿಗೆ ಕಡಿತದಂತಹ ನಿಯಮಗಳನ್ನು ಹೆಚ್ಚಿನ ಚಂದಾದಾರರು ತಿಳಿದಿದ್ದಾರೆ. ಆದರೆ, ಇವುಗಳ ಹೊರತಾಗಿ, ಲಾಯಲ್ಟಿ-ಕಮ್-ಲೈಫ್ (Loyalty-cum-Life) ಪ್ರಯೋಜನಕ್ಕೆ ಸಂಬಂಧಿಸಿದ ನಿಯಮವೂ ಇದೆ. ಈ ಲಾಭದಲ್ಲಿ, ನೌಕರನು ನಿವೃತ್ತಿಯ ಸಮಯದಲ್ಲಿ 50,000 ರೂ.ಗಳವರೆಗೆ ಲಾಭ ಪಡೆಯಬಹುದು.

ವಾಸ್ತವವಾಗಿ, ಎಲ್ಲಾ ಪಿಎಫ್ ಖಾತೆದಾರರು ತಮ್ಮ ಉದ್ಯೋಗಗಳನ್ನು ಬದಲಾಯಿಸಿದ ನಂತರವೂ ಒಂದೇ ಇಪಿಎಫ್ (EPF) ಖಾತೆಗೆ ಕೊಡುಗೆ ನೀಡಬೇಕೆಂದು ಸೂಚಿಸಲಾಗುತ್ತದೆ. ಇದರೊಂದಿಗೆ, ಸತತ 20 ವರ್ಷಗಳ ಕಾಲ ಒಂದೇ ಖಾತೆಯಲ್ಲಿ ಕೊಡುಗೆ ನೀಡಿದ ನಂತರ ಅವರು ಲಾಯಲ್ಟಿ-ಕಮ್-ಲೈಫ್ (Loyalty-cum-Life) ನ ಪ್ರಯೋಜನವನ್ನು ಪಡೆಯಬಹುದು.

ಇದನ್ನೂ ಓದಿ - EPFO Alert! ಇಪಿಎಫ್‌ಒ ಖಾತೆದಾರರೇ ತಕ್ಷಣವೇ ಈ ಕೆಲಸ ಮಾಡಿ, ಇಲ್ಲದಿದ್ದರೆ ನಷ್ಟವಾಗಬಹುದು

ಕೇಂದ್ರ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ?
ಇಪಿಎಫ್‌ಒ (EPFO) ತಜ್ಞ ಭಾನು ಪ್ರತಾಪ್ ಶರ್ಮಾ ಅವರ ಪ್ರಕಾರ, ಸಿಬಿಡಿಟಿ ತಮ್ಮ ಇಪಿಎಫ್ ಖಾತೆಗೆ 20 ವರ್ಷಗಳಿಂದ ಕೊಡುಗೆ ನೀಡಿದ ಖಾತೆದಾರರಿಗೆ ಲಾಯಲ್ಟಿ-ಕಮ್-ಲೈಫ್ ಬೆನಿಫಿಟ್ ಪ್ರಯೋಜನವನ್ನು ವಿಸ್ತರಿಸಲು ಶಿಫಾರಸು ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರರ್ಥ ಅರ್ಹ ಪಿಎಫ್ ಗ್ರಾಹಕರಿಗೆ 50,000 ರೂ. ಹೆಚ್ಚುವರಿ ಲಾಭ ಸಿಗುತ್ತದೆ.

ಯಾರು ಎಷ್ಟು ಲಾಭ ಪಡೆಯಬಹುದು?
ಲಾಯಲ್ಟಿ-ಕಮ್-ಲೈಫ್ ಬೆನಿಫಿಟ್ ಅಡಿಯಲ್ಲಿ, 5,000 ರೂ.ಗಳವರೆಗೆ ಮೂಲ ವೇತನ ಹೊಂದಿರುವ ಜನರಿಗೆ 30,000 ರೂ. 5,001 ರಿಂದ 10,000 ರೂ.ವರೆಗಿನ ಮೂಲ ವೇತನ ಹೊಂದಿರುವವರಿಗೆ 40,000 ರೂ.ಗಳ ಲಾಭ ಮತ್ತು ಮೂಲ ವೇತನ 10,000 ರೂ.ಗಿಂತ ಹೆಚ್ಚಿದ್ದರೆ ಅವರಿಗೆ 50,000 ರೂ. ಲಾಭ ಸಿಗಲಿದೆ.

ಇದನ್ನೂ ಓದಿ - Credit Card Payment ಬಾಕಿ ಇದೆಯೇ? ಪಾವತಿಸಲು ಖಾತೆಯಲ್ಲಿ ಹಣವಿಲ್ಲವೇ? ಇಲ್ಲಿದೆ ಸುಲಭ ಮಾರ್ಗ

ಪ್ರಯೋಜನಗಳನ್ನು ಪಡೆಯಲು ನಾನು ಏನು ಮಾಡಬೇಕು?
ಇಪಿಎಫ್‌ಒ ಚಂದಾದಾರರು ಇದರ ಲಾಭ ಪಡೆಯಲು ಉತ್ತಮ ಮಾರ್ಗವೆಂದರೆ ಅವರು ತಮ್ಮ ಉದ್ಯೋಗಗಳನ್ನು ಬದಲಾಯಿಸಿದರೂ ಅದೇ ಇಪಿಎಫ್ ಖಾತೆಯೊಂದಿಗೆ ಮುಂದುವರಿಯುವುದು. ಇದಕ್ಕಾಗಿ, ನಿಮ್ಮ ಹಳೆಯ ಉದ್ಯೋಗದಾತ ಮತ್ತು ಪ್ರಸ್ತುತ ಉದ್ಯೋಗದಾತರಿಗೆ ನೀವು ಮಾಹಿತಿಯನ್ನು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಕೆಲಸ ಮಾಡುವಾಗ ಪಿಎಫ್ ವಾಪಸಾತಿ ಮಾಡದಂತೆ ಸೂಚಿಸಲಾಗುತ್ತದೆ. ಒಂದೊಮ್ಮೆ ಈ ನಿಯಮ ಅನುಸರಿಸಲು ವಿಫಲರಾದಲ್ಲಿ ಆದಾಯ ತೆರಿಗೆ ಸೇರಿದಂತೆ ನಿವೃತ್ತಿ ನಿಧಿಯಲ್ಲಿ ಚಂದಾದಾರರು ನಷ್ಟ ಅನುಭವಿಸಬಹುದು. ಇದರಿಂದಾಗಿ ಅವರು ಪಿಂಚಣಿ ಯೋಜನೆಯಲ್ಲಿ ಸಿಗುವ ಕೆಲವು ಸೌಲಭ್ಯಗಳಿಂದಲೂ ವಂಚಿತರಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News